from ARTICLES!

ಸಾವು, ಕರೆಯದೇ ಬರುವ ಅತಿಥಿ


 Death, the only guest comes without notice!                           ಸಾವು, ಕರೆಯದೇ ಬರುವ ಅತಿಥಿ

 

 

ಅದೊಂದು ಶನಿ, ಅದಕ್ಕೊಂದು ಶಿಸ್ತಿಲ್ಲ. ನಿಯತ್ತಿಲ್ಲ. ಕರುಣೆಯಿಲ್ಲ. ದಯೆ-ದಾಕ್ಷಿಣ್ಯವಿಲ್ಲ. ಬಡವ-ಬಲ್ಲಿದರೆಂಬ ಬೇಧವಿಲ್ಲ. ಖದೀಮರನ್ನು ಕಂಡರೆ ಹೆದರಿಕೆಯಿಲ್ಲ. ಮಕ್ಕಳನ್ನು ಕಂಡರೆ ವಿಶೇಷ ಪ್ರೀತಿಯೂ ಇಲ್ಲ. ರೋಗಿಗಳ ಮೇಲೆ ಅದಕ್ಕೆ ಅನುಕಂಪವಿಲ್ಲ. ನಿರ್ಗತಿಕರ ಬಗ್ಗೆ ವಿಶೇಷ ಒಲವೂ ಇಲ್ಲ. ಶ್ರೀಮಂತರೊಂದಿಗೆ ಅದು ಚೌಕಾಸಿಗೆ ನಿಲ್ಲುವುದಿಲ್ಲ. ಪಾಪ, ಬಡವ ಎಂದು ಬಿಟ್ಟು ಹೋಗುವುದೂ ಇಲ್ಲ. ಮನುಷ್ಯರ ಕಥೆ ಹಾಗಿರಲಿ, ಮೂಕ ಪ್ರಾಣಿಗಳ ವಿಷಯದಲ್ಲಾದರೂ ಈ ಶನಿ ಮುಂಡೇದು ರಿಯಾಯಿತಿ ತೋರುವುದಿಲ್ಲ. ಬದಲಿಗೆ, ಯಾವುದೋ ಕಳ್ಳ ಹೊತ್ತಿನಲ್ಲಿ ಬಂದು ತನಗೆ ಬೇಕಾದವರನ್ನು ಕರೆದುಕೊಂಡು ಹೋಗಿಯೇಬಿಡುತ್ತದೆ. ಹೀಗೆ, ಹೇಳದೇ ಕೇಳದೆ ಬಂದು ಹೋಗುವ ಅನಿರೀಕ್ಷಿತ ಅತಿಥಿಯ ಹೆಸರೇ-ಸಾವು!

ಸ್ವಾರಸ್ಯವೆಂದರೆ, ಸಾವಿರ ಸಂಕಟಗಳ ನಡುವೆ ಉಳಿದವರು ಕೂಡ ಸಾಯಲು ಇಚ್ಛಿಸುವುದಿಲ್ಲ. ತುಂಬ ದುಃಖವಾದಾಗ, ಬೇಸರವಾದಾಗ, ಸಾಲ ಜತೆಯಾದಾಗ, ನೌಕರಿ ಹೋದಾಗ, ಮೇಲಿಂದ ಮೇಲೆ ಅವಮಾನಗಳಾದಾಗ, ಮೈ ಎಂಬುದು ರೋಗಗಳ ಗೂಡಾದಾಗ- `ಹೀಗೆ ಒದ್ದಾಡುವ ಬದಲು ಛಕ್ಕಂತ ಸತ್ತು ಹೋದ್ರೆ ಸಾಕಪ್ಪಾ ಅನ್ನಿಸ್ತಿದೆ' ಎಂದಿರುತ್ತಾರೆ ನಿಜ. ಆದರೆ, ಅದು ಎದೆಯಾಳದ ಮಾತಾಗಿರುವುದಿಲ್ಲ. ಸಂಕಟದಿಂದ ಸಾವನ್ನು ಧ್ಯಾನಿಸುವ ಮಂದಿ ಕೂಡ, ಈಗಲೋ ಇನ್ನೊಂದು ಕ್ಷಣದಲ್ಲೋ ನನಗೆ ಒಳ್ಳೆಯದಾಗಿಬಿಡುತ್ತೆ ಎಂದು ಕೊಳ್ಳುತ್ತಾರೆ. ಇಲ್ಲಿಯವರೆಗೆ ನಾನು ಯಾರಿಗೂ ಕೆಟ್ಟದು ಮಾಡಿಲ್ಲವಲ್ಲ? ದೇವರಿಗೆ ಪೂಜೆ ಮಾಡುವುದನ್ನು ಮರೆತಿಲ್ಲವಲ್ಲ? ಐದಾರು ಜನಕ್ಕೆ ಸಹಾಯ ಮಾಡಿದ್ದೀನಲ್ಲ? ಈ ಒಳ್ಳೆಯತನವೇ (?!) ನನ್ನನ್ನು ಕಾಪಾಡುತ್ತದೆ ಎಂದು ಬಲವಾಗಿ ನಂಬಿರುತ್ತಾರೆ.

ಹಾಗಾಗಿ, ಯಾರೆಂದರೆ ಯಾರೂ
ಸಾವು ಬಯಸುವುದಿಲ್ಲ. ಅದನ್ನು ಆಹ್ವಾನಿಸುವುದಿಲ್ಲ. ಅಕಸ್ಮಾತ್ ಕನಸುಬಿದ್ದರೆ, ಸರಹೊತ್ತಿನಲ್ಲೇ ದಡಬಡಿಸಿ ಎದ್ದು ಡಗ್ಗಡಗ್ಗ ಹೊಡೆದುಕೊಳ್ಳುವ ಹೃದಯಬಡಿತ ಕೇಳಿಸಿಕೊಂಡು, ಕಣ್ಣುಜ್ಜಿಕೊಳ್ಳುತ್ತಾರೆ. ಅಂಥ ಯಾವ ಅನಾಹುತವೂ ನಡೆದಿಲ್ಲ ಎಂದು ಎರಡೆರಡು ಬಾರಿ ಖಚಿತಪಡಿಸಿಕೊಳ್ಳುತ್ತಾರೆ. ನಂತರ ಆ ಅಪರಾತ್ರಿಯಲ್ಲೇ ದೇವರ ಮುಂದೆ ನಿಂತು ಕೆನ್ನೆ ಕೆನ್ನೆ ಬಡಿದುಕೊಂಡು- `ಏನೂ ತೊಂದರೆ ಯಾಗದಿರಲಿ ಭಗವಂತಾ' ಎಂದು ಪ್ರಾರ್ಥಿಸುತ್ತಾರೆ. ಅಕಸ್ಮಾತ್ ಬೆಳಗಿನ ಜಾವದಲ್ಲೇ ಯಾರೋ ಸತ್ತು ಹೋದಂತೆ ಕನಸು ಬಿದ್ದರಂತೂ ಮುಗಿದೇ ಹೋಯಿತು. ತಕ್ಷಣವೇ ಪುರೋಹಿತರ ಬಳಿ ಹೋಗಿ, ಮನೆಯ ಪುರಾಣವನ್ನೂ, ಕೆಟ್ಟ ಕನಸು ಬಿದ್ದ ಸಂಗತಿಯನ್ನೂ ಸಾದ್ಯಂತವಾಗಿ ವಿವರಿಸುತ್ತಾರೆ. ಕವಡೆ ಬಿಡುತ್ತಾರೆ. ಅಂಗೈ ತೋರಿಸಿ ಶಾಸ್ತ್ರ ಕೇಳುತ್ತಾರೆ. ಗಡಿಬಿಡಿಯಿಂದಲೇ ದೇವಸ್ಥಾನಕ್ಕೆ ನುಗ್ಗುತ್ತಾರೆ. ಅರ್ಚನೆ ಮಾಡಿಸುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ನಂತರ- `ಆ ಶನಿ ಮುಂಡೇದು ಬರದೇ ಇದ್ದರೆ ಸಾಕಪ್ಪಾ' ಎಂದುಕೊಂಡೇ ಬಾಕಿ ಉಳಿದ ಕೆಲಸಗಳತ್ತ ತಿರುಗಿ ನೋಡುತ್ತಾರೆ.

ಸ್ವಾರಸ್ಯವೆಂದರೆ, ಯಾರೂ ಕರೆಯದಿದ್ದರೂ ಈ ಸಾವೆಂಬ ಅತಿಥಿ ಬಂದೇ ಬರುತ್ತದೆ. ಸಣ್ಣದೊಂದು ಮುನ್ಸೂಚನೆಯನ್ನೂ ಕೊಡದೆ ಬರುತ್ತದೆ. ಅದು ಕಾಲಾತೀತ, ಪಕ್ಷಾತೀತ ಮತ್ತು ಜಾತ್ಯಾತೀತ. ಸಾವಿನ, ಅರ್ಥಾತ್ ಕಾಲರಾಯನ ಕಾಕದೃಷ್ಟಿ ಬಿದ್ದವನನ್ನು ಭಗವಂತನೂ ಕಾಪಾಡಲಾರ!

ಸಾವಿರ ಮಂದಿಯ ಪ್ರಾರ್ಥನೆ, ನೂರು ದೇವರುಗಳ ಆಶೀರ್ವಾದ, ಕೋಟ್ಯಂತರ ಮಂದಿಯ ಪ್ರೀತಿ, ಒಳ್ಳೆಯದನ್ನು ಮಾತ್ರ ಬಯಸುವ ಮನಸ್ಸು, ಹೊಂದಿರುವ ಮನುಷ್ಯ ಸಾವನ್ನೂ ಜಯಿಸಬಲ್ಲ ಎಂದು ಅವರಿವರು ಹೇಳುವುದುಂಟು. ಅದೇ ನಿಜವಾಗಿದ್ದರೆ, ಆಂಧ್ರಪ್ರದೇಶದ ಮುಖ್ಯಮಂತ್ರಿ [^]
ವೈ.ಎಸ್.ಆರ್. ರೆಡ್ಡಿ ಅಂಥ ದುರ್ಮಣರಣಕ್ಕೆ ಈಡಾಗುತ್ತಿರಲಿಲ್ಲ. ಕನ್ನಡಿಗರ ಕಣ್ಮಣಿ ಡಾ. ರಾಜ್‌ಕುಮಾರ್‌ಗೆ ದಿಢೀರ್ ಹೃದಯಾಘಾತವಾಗುತ್ತಿರಲಿಲ್ಲ. ಎಲ್‌ಟಿಟಿಇ ನಾಯಕ ಪ್ರಭಾಕರನ್, ಅಬ್ಬೇಪಾರಿಯಂತೆ ಸಾಯುತ್ತಿರಲಿಲ್ಲ. ಸದ್ದಾಂ ಹುಸೇನ್ ಎಂಬ ಸರ್ವಾಧಿಕಾರಿಯ ಕೊರಳಿಗೆ ಹಗ್ಗ ಬೀಳುತ್ತಿರಲಿಲ್ಲ. ಸ್ವಾಮಿ ವಿವೇಕಾನಂದರಂಥ ಮಹಾಪುರುಷರು ಚಿಕ್ಕ ವಯಸ್ಸಿಗೇ ಕಣ್ಮರೆಯಾಗುತ್ತಿರಲಿಲ್ಲ. ನೇತಾಜಿಯಂಥ ಅಪ್ರತಿಮ ನಾಯಕ ವಿಮಾನದೊಂದಿಗೆ ಮಾಯವಾಗುತ್ತಿರಲಿಲ್ಲ ಮತ್ತು ಶಂಕರ್‌ನಾಗ್ ಎಂಬ `ಎಂದೂ ಮಾಸದ ನಗೆಗೆ' ಅಪಘಾತವಾಗುತ್ತಲೂ ಇರಲಿಲ್ಲ.

ಆದರೆ, ಸಾವೆಂಬುದು ನಿರ್ದಯಿ. ಒಳ್ಳೆಯವರು ಒಂದಷ್ಟು ಜಾಸ್ತಿ ದಿನ ಬದುಕಿರಲಿ. ಕೇಡಿಗರು ಮಾತ್ರ ಬೇಗನೇ ಬರಲಿ ಎಂದು ಅದು ಎಂದೂ ಯೋಚಿಸುವುದಿಲ್ಲ. ಒಂದು ಮಗುವಿನ ಜೀವ ಹೊತ್ತೊಯ್ದರೆ, ತಾಯಿ ಅನ್ನಿಸಿಕೊಂಡವಳಿಗೆ ಎಷ್ಟು ಸಂಕಟವಾಗಬಹುದು? ಮೂರು ತಿಂಗಳ ಹಿಂದಷ್ಟೇ ಮದುವೆಯಾದ ಹುಡುಗನ ಉಸಿರು ನಿಲ್ಲಿಸಿದರೆ ಅವನ ಹೆಂಡತಿಯ ಬದುಕು ಏನಾಗಬಹುದು? ಪ್ರಾಯಕ್ಕೆ ಬಂದ ಮಕ್ಕಳು ಕಣ್ಮುಂದೆಯೇ ಸತ್ತುಹೋದಾಗ ತಂದೆಯಾದವನ ಮನಸ್ಸಿಗೆ ಅದೆಷ್ಟು ಘಾಸಿಯಾಗಬಹುದು? ಬದುಕಿಡೀ ಒಂದು ಇರುವೆಯನ್ನೂ ಕೊಲ್ಲದಂಥ ಸಜ್ಜನನೊಬ್ಬ ಲಾರಿಯ ಚಕ್ರಕ್ಕೆ ಸಿಕ್ಕಿಕೊಂಡು ಅಪ್ಪಚ್ಚಿಯಾದಾಗ ಅವನ ಬಂಧುಗಳು ಹೇಗೆ ರೋಧಿಸಬಹುದು? ತನ್ನ ಯಶಸ್ಸು ಕಂಡು ಖುಷಿಯಾದ ತಂದೆಗೆ ಮರುಕ್ಷಣವೇ ಹೃದಯಾಘಾತವಾದ ಮಗನ ಗೋಳು, ನಂತರದ ಬಾಳು ಹೇಗಿರ ಬಹುದು? ಒಂದೇ ಕುಟುಂಬದ ಹತ್ತು ಮಂದಿ ದೇವಸ್ಥಾನದಿಂದ ಹಿಂದಿರುಗುವಾಗ ಅಪಘಾತದಲ್ಲಿ ಸತ್ತರೆ ಬದುಕಿಗೆ ಯಾವ ಅರ್ಥವಿದೆ? ಉಹುಂ, ಇಂಥ ಯಾವ ಪ್ರಶ್ನೆಗಳನ್ನೂ ಸಾವೆಂಬ ಸಾವು ಕೇಳಿಸಿಕೊಳ್ಳುವುದಿಲ್ಲ. ಜನರೋ, ಜನುವಾರುಗಳೋ ತಾವಾಗಿಯೇ ನನ್ನನ್ನು ಕರೆಯಲಿ ಎಂದು ಬಯಸುವುದಿಲ್ಲ. ಕರೆಯದೇ ಹೋದರೆ ಕೆರದಲ್ಲಿ ಹೊಡೆದಾರು ಎಂದು ಹೆದರುವುದೂ ಇಲ್ಲ! ಯಾರೋ ಒಂದಿಬ್ಬರು ಒಳ್ಳೆಯ ಕೆಲಸಕ್ಕೆ ನಿಂತಿದ್ದರೆ ಅದು ಮುಗಿಯಲಿ ಎಂದು ಕಾಯುವುದಿಲ್ಲ. ಇಂಥ ಒಳ್ಳೆಯ ಕೆಲಸಗಳಿಗೆಂದೇ ಇವರು ಬದುಕಲಿ ಎಂದು ಗ್ರೇಸ್ ಕೊಡುವುದೂ ಇಲ್ಲ. ಹೋಗಲಿ; ಕೆಲವೇ ಕೆಲವು ಮಂದಿಗೆ-ವಿಐಪಿಗಳು ಅನ್ನಿಸಿಕೊಂಡವರಿಗಾದರೂ `ಇಂಥ ದಿನ, ಇಷ್ಟು ಗಂಟೆಗೆ ಸರಿಯಾಗಿ ಬರ್‍ತೇನೆ. ರೆಡಿಯಾಗಿರಿ' ಎಂದು ಮುನ್ಸೂಚನೆಯನ್ನೂ ಕೊಡುವುದಿಲ್ಲ. ಬದಲಿಗೆ, ತನಗೆ ಇಷ್ಟ ಬಂದ ಹೊತ್ತಿನಲ್ಲಿ ಬರುತ್ತದೆ. ತನಗೆ ಬೇಕೆನ್ನಿಸಿದ ರೂಪದಲ್ಲಿ ಬರುತ್ತದೆ!

ಹೌದಲ್ಲವಾ? ಸಾವೆಂಬುದು ಸೈಕಲ್, ಸ್ಕೂಟರ್, ಕಾರು, ಬಸ್, ರೈಲು, ವಿಮಾನ ಅಪಘಾತದ ರೂಪದಲ್ಲಿ ಬರಬಹುದು. ಜ್ವರದ ನೆಪದಲ್ಲಿ ಬರಬಹುದು. ಹೃದಯಾಘಾತದ ಕಾರಣ ಹೇಳಬಹುದು.ಅದು ಮನಸ್ಸು ಮಾಡಿದರೆ ಕಳ್ಳರ ವೇಷದಲ್ಲೇ ಬರಬಹುದು. ಕುದುರೆಯ ಕಾರಣದಿಂದಲೂ ಬರಬಹುದು. ಅಷ್ಟೇ ಅಲ್ಲ, ಸಾವೆಂಬುದು ವೈದ್ಯರ ರೂಪದಲ್ಲೇ ಬಂದು, ಹಲೋ ಹೇಳಿ ಉಸಿರು ನಿಲ್ಲಿಸಬಹುದು!

* * *
ಎಲ್ಲರನ್ನೂ ಹೆದರಿಸುವ, ದೇವರನ್ನೇ ಅಣಕಿಸುವ, ನಂಬಿಕೆಗಳನ್ನೇ ಬುಡಮೇಲು ಮಾಡುವ ಈ ಸಾವೆಂಬೋ ಸಾವು ಒಂದು ವೇಳೆ ಮೊದಲೇ ಮುನ್ಸೂಚನೆ ನೀಡಿ ಬಂದಿದ್ದರೆ ಬದುಕು ಹೇಗಿರುತ್ತಿತ್ತು? ನಾನು ಇಂಥ ದಿನವೇ ಇದೇ ರೀತಿಯಲ್ಲಿ ಸಾಯುತ್ತೇನೆ ಎಂದು ಗೊತ್ತಿದ್ದಿದ್ದರೆ ಜನ ಹೇಗೆ ರಿಯಾಕ್ಟ್ ಮಾಡುತ್ತಿದ್ದರು? ಈ ಕುತೂಹಲದ ಪ್ರಶ್ನೆಗಳಿಗೆ ಹೀಗೆ ಉತ್ತರಿಸಬಹುದೇನೋ: ಸಾವು ಹೀಗೇ ಬರುತ್ತೆ ಎಂದು ಗೊತ್ತಿದ್ದಿದ್ದರೆ- ವೈ.ಎಸ್. ರಾಜಶೇಖರ ರೆಡ್ಡಿ ಮೊನ್ನೆ ಹೆಲಿಕ್ಯಾಪ್ಟರ್ ಹತ್ತುತ್ತಿರಲಿಲ್ಲ. ಎಲ್‌ಟಿಟಿಇ ನಾಯಕ ಪ್ರಭಾಕರನ್, ಸೇನೆಯೊಂದಿಗೆ ಸೆಣಸುವ ರಿಸ್ಕು ತಗೊಳ್ತಿರಲಿಲ್ಲ. ಮೈಕಲ್ ಜಾಕ್ಸನ್- ಮಾದಕ ದ್ರವ್ಯದ ಹಿಂದೆ ಬೀಳುತ್ತಿರಲಿಲ್ಲ. ಸುಂದರಿ ಡಯಾನ ಕಾರು ಹತ್ತುತ್ತಿರಲಿಲ್ಲ. ವೀರಪ್ಪನ್, ಕಾಡು ಬಿಟ್ಟು ಹೊರಗೇ ಬರುತ್ತಿರಲಿಲ್ಲ. ಇಂದಿರಾಗಾಂಧಿಯ ಬೆನ್ನಿಗೆ ಅಂಗರಕ್ಷಕರಿರುತ್ತಿರಲಿಲ್ಲ. ಅಮಾಯಕಿಯೊಬ್ಬಳ ಹೂಮಾಲೆಗೆ ರಾಜೀವ್‌ಗಾಂಧಿ ಕೊರಳೊಡ್ಡುತ್ತಿರಲಿಲ್ಲ. ಸಂಜಯಗಾಂಧಿ ವಿಮಾನ ಹತ್ತುತ್ತಿರಲಿಲ್ಲ. ಅಷ್ಟೇ ಅಲ್ಲ, ಮಗಳು ಕಾಂಚನಾ ಕೊಳವೆ ಬಾವಿಗೆ ಬೀಳುತ್ತಾಳೆ ಎಂದು ಮೊದಲೇ ಗೊತ್ತಿದ್ದಿದ್ದರೆ ಬಿಜಾಪುರದ ಆ ತಂದೆ, ತಾಯಿ, ಅವಳನ್ನು ರಸ್ತೆಗೆ ಬಿಡುತ್ತಲೂ ಇರಲಿಲ್ಲ. ಸಾವೆಂಬುದು ಇಂಥ ದಿನವೇ ಬರಲಿದೆ ಎಂದು ಗೊತ್ತಿದ್ದರೆ ಬಹುಶಃ ನಮ್ಮ ಅಣ್ಣಾವ್ರು `ಇದೇ ಕಡೆ' ಎಂದುಕೊಂಡು ಒಂದು ಅಪರೂಪದ ಸಿನಿಮಾ ಕೊಟ್ಟಿರ್‍ತಾ ಇರ್‍ತಿದ್ರು. ಹಾಗೆಯೇ, ನನ್ನ ನಂತರ ನೆನಪಿಗಿರಲಿ ಎಂಬ ಸದಾಶಯದಿಂದ ಹತ್ತಿಪ್ಪತ್ತು ಚಿತ್ರಕಥೆಗಳನ್ನು ಬರೆದಿಟ್ಟ ನಂತರವೇ ಶಂಕರ್‌ನಾಗ್ ಕಾರು ಹತ್ತಿರುತ್ತಿದ್ದರು. ಆದರೆ ಒಬ್ಬ ಗಾಂಧೀಜಿ ಮಾತ್ರ ಸಾವೆಂಬುದು ನಾಥೂರಾಂ ಗೋಡ್ಸೆಯ ರೂಪದಲ್ಲೇ ಬರುತ್ತದೆ ಎಂದು ತಿಳಿದ ನಂತರವೂ ಏನೆಂದರೆ ಏನೂ ಬದಲಾಗುತ್ತಿರಲಿಲ್ಲ! ಬದಲಿಗೆ ನಾಳೆ ಬರುವುದು ನನಗಿಂದೇ ಬರಲಿ ಎಂದುಕೊಂಡು ತಾವಾಗಿಯೇ ಗೋಡ್ಸೆಯ ಮನೆ ಹುಡುಕಿಕೊಂಡು ಹೋಗಿಬಿಡುತ್ತಿದ್ದರು!

ಇದೆಲ್ಲ, ಈಗ ನಮ್ಮೊಂದಿಗೆ ಇಲ್ಲದವರನ್ನು, ಕಥೆ [^]ಯಾಗಿ ಹೋದವರನ್ನು ಕುರಿತ ಮಾತಾಯಿತು. ಒಂದು ವೇಳೆ, ನಾವು ಇಂಥ ದಿನವೇ ಸಾಯುತ್ತೇವೆ ಎಂದು ನಮಗೆಲ್ಲ ಮೊದಲೇ ಗೊತ್ತಾಗಿ ಹೋಗಿದ್ದರೆ ಬದುಕು ಹೇಗಿರುತ್ತಿತ್ತು? ಈ ಪ್ರಶ್ನೆಗೆ ಒಂದು ಅಂದಾಜಿನ ಉತ್ತರಗಳನ್ನು ಪಟ್ಟಿ ಮಾಡಿದರೆ, ಮೊದಲಿಗೆ ಖುಷಿಯಾಗುತ್ತದೆ ನಿಜ. ಮರುಕ್ಷಣವೇ ಭಯವಾಗುತ್ತದೆ. ಏಕೆಂದರೆ, ತಾನು ಇಂಥ ದಿನವೇ, ಹೀಗೇ ಸಾಯುತ್ತೇನೆ ಎಂದು ಮನುಷ್ಯನಿಗೆ ಗೊತ್ತಾಗಿ ಹೋಗಿದ್ದರೆ- ಅವನಿಗೆ ಸಾವಿನ ಭಯವೇ ಇರುತ್ತಿರಲಿಲ್ಲ. ದೇವರಿಗಾಗಲಿ, ಜ್ಯೋತಿಷಿಗಳಿಗಾಗಲಿ, ವೈದ್ಯರಿಗಾಗಲಿ ಡಿಮ್ಯಾಂಡೇ ಇರುತ್ತಿರಲಿಲ್ಲ. ಬದುಕಿನಲ್ಲಿ ಥ್ರಿಲ್ ಇರುತ್ತಿರಲಿಲ್ಲ. ಕನಸುಗಳಿಗೆ ಅರ್ಥವಿರುತ್ತಿರಲಿಲ್ಲ. ಎಲ್ಲರೂ ಒಳ್ಳೆಯ ಸಾವನ್ನೇ ಬಯಸುತ್ತಿದ್ದರು. ಸಾವಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಕೆಟ್ಟ ಬುದ್ಧಿಯ ಜನ, ಹೇಗಿದ್ರೂ ನಾಳೆ ಸಾಯೋದು ಗ್ಯಾರಂಟಿ, ಹಾಗಾಗಿ ಇನ್ನೊಂದಷ್ಟು ಕ್ರೈಮು ಮಾಡಿಯೇ ಸಾಯೋಣ ಎಂದು ನಿಂತುಬಿಡ್ತಿದ್ರು. ಕಾರ್ ಅಪಘಾತದಲ್ಲಿ ಸಾಯ್ತೀನಿ ಅಂತೇನಾದ್ರೂ ಗೊತ್ತಿದ್ದಿದ್ರೆ ಆತ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದ. ನೀರಿಂದ ಸಾವು ಅನ್ನೋದು ಗೊತ್ತಿದ್ದವ ಮಳೆ ಹನಿಗೆ ಕೂಡ ಮುಖ ಒಡ್ಡುತ್ತಿರಲಿಲ್ಲ. ಎಲ್ಲರೂ ಕಡೆಯ ದಿನಗಳನ್ನು ತಮ್ಮ ಇಷ್ಟದಂತೆ ಬದುಕಲು ಪ್ಲಾನ್ ಮಾಡ್ತಾ ಇರ್‍ತಿದ್ರು. ಆಸೆಬುರುಕರು ಮಾತ್ರ ಬ್ಯಾಂಕುಗಳಿಗೆ, ಎಲ್ಲೈಸಿ ಕಂಪನಿಗಳಿಗೆ, ಗೆಳೆಯರಿಗೆ, ಬಂಧುಗಳಿಗೆ ಸುಳ್ಳು ಸುಳ್ಳೇ ನಂಬಿಸಿ ಅಪಾರ ಮೊತ್ತದ ಸಾಲ ಪಡೆದು, ಭಾರೀ ಮೊತ್ತಕ್ಕೆ ವಿಮೆ ಮಾಡಿಸಿ ಎಲ್ಲರಿಗೂ ತಿರುಪತಿ ನಾಮ ಹಾಕಿ ಹೋಗಿಬಿಡ್ತಿದ್ರು.

ಅಷ್ಟೇ ಅಲ್ಲ, ನಾನು ಇಂಥ ದಿನವೇ ಸಾಯ್ತೀನಿ ಎಂದು ಮೊದಲೇ ಗೊತ್ತಿದ್ದಿದ್ದರೆ- `ನಾಳೆ ಬಾ' ಎಂಬ ಬರಹ [^] ಎಲ್ಲ ಮನೆಯ ಬಾಗಿಲ ಮೇಲೂ ಕಡ್ಡಾಯವಾಗಿರುತ್ತಿತ್ತು. ಸಾಯುವ ದಿನ ಇನ್ನೂ ಎರಡು ವರ್ಷ ಬಾಕಿಯಿರುವಾಗಲೇ ಎಂಥವರಿಗೂ ಚಿಂತೆ ಶುರುವಾಗಿಬಿಡ್ತಿತ್ತು. ಸಾಹಿತಿ-ಕಲಾವಿದರುಗಳಂತೂ ತಮಗೆ ಸೂಕ್ತ ಸ್ಥಾನಮಾನ, ಪ್ರಶಸ್ತಿ ಬರಲಿಲ್ಲ ಎಂಬುದನ್ನೇ ಮುಂದಿಟ್ಟುಕೊಂಡು ಲಾಬಿಗೆ ಮುಂದಾಗುತ್ತಿದ್ದರು. ಪರಮಾಪ್ತರ ಮುಂದೆ ನಿಂತು- `ನಿಮ್ಮಲ್ಲಿ ಸುದ್ದಿ ಮುಚ್ಚಿಟ್ಟು ಲಾಭವೇನಿದೆ? ನಾನು ಇಂಥ ದಿನವೇ ಸಾಯ್ತೀನಿ. ಅಷ್ಟರೊಳಗೆ ಒಂದು ಪ್ರಶಸ್ತಿ ಕೊಡಿಸ್ರೀ. ನೆಮ್ಮದಿ ಯಾಗಿ ಸಾಯೋಕೆ ಅವಕಾಶ ಮಾಡಿಕೊಡ್ರೀ' ಎಂದು ಅಂಗಲಾಚುತ್ತಿದ್ದರು. ರಾಜಕಾರಣಿಗಳಂತೂ ಸಾಯೋದ್ರೊಳಗೆ ನಾನು ಮಂತ್ರಿಯಾಗಬೇಕೂ... ಎಂದು ರಚ್ಚೆ ಹಿಡಿದು ಕೂತುಬಿಡುತ್ತಿದ್ದರು. ತಮಾಷೆ ಕೇಳಿ: ಆ ಸಂದರ್ಭದಲ್ಲಿ ಕೂಡ ಪರ-ವಿರೋಧವಾಗಿ ಗಲಾಟೆಗಳು, ಚರ್ಚೆಗಳು ನಡೆಯುತ್ತಿದ್ದವು. ಕೆಲವರು, ಸಾಯೋಕಿಂತ ಮೊದಲೇ `ಅವರ' ಆಸೆಗಳನ್ನು ಈಡೇರಿಸಿ ಎಂದು ಪಟ್ಟು ಹಿಡಿದಿರ್‍ತಿದ್ರು. ಮತ್ತೆ ಕೆಲವರು- ಪ್ರಶಸ್ತಿಯನ್ನೋ, ಮಂತ್ರಿ ಪದವಿಯನ್ನೋ ಪಡೆದು ಹೆಸರು ಕೆಡಿಸಿಕೊಳ್ಳುವ ಬದಲು, ನೆಮ್ಮದಿಯಾಗಿ ಸಾಯೋಕಾಗಲ್ವ ನಿಮ್ಗೆ ಎಂದು ಸ್ವಾಟಿ ತಿವಿಯುತ್ತಿದ್ದರು. ಈ ಮಧ್ಯೆಯೇ ಕೆಲವರು, ಸಾವನ್ನು ತಡೆಯುವಂಥ ಸಂಶೋಧನೆ ಮಾಡ್ರೀ ಎಂದು ವಿಜ್ಞಾನಿಗಳನ್ನು ಒತ್ತಾಯಿಸುತ್ತಿದ್ದರು. ಮಾಟ-ಮಂತ್ರ ನಂಬುವ ಜನರಂತೂ ಸಾವೆಂಬುದು ತಮ್ಮನ್ನು ಮುಟ್ಟದಂತೆ ತಮ್ಮ ಸುತ್ತಲೂ ಅಷ್ಟದಿಗ್ಬಂಧನ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದರು. ಮುಖ್ಯವಾಗಿ, ಸಾವಿನ ಬಗ್ಗೆ ಮೊದಲೇ ತಿಳಿದಿದ್ದರೆ ಮನೆಮನೆಯೂ ಹುಚ್ಚಾಸ್ಪತ್ರೆಯಂತಾಗುತ್ತಿತ್ತು. ಪ್ರೀತಿಯೆಂಬುದು ತೋರಿಕೆಯಾಗುತ್ತಿತ್ತು. ನಂಬಿಕೆಯ ಹೆಸರಲ್ಲೇ ವಂಚನೆ ನಡೆಯುತ್ತಿತ್ತು. ಗಂಡನಾದವನು ತೀರಾ ಗುಟ್ಟು ಎಂಬಂತೆ ತನ್ನ ಸಂಕಟ ಹೇಳಿಕೊಂಡಿರುತ್ತಿದ್ದ. ಆದರೆ ಹೆಂಡತಿಯಾದವಳು ಅದನ್ನು ಹತ್ತು ಮಂದಿಗೆ ಹೇಳಿಬಿಟ್ಟಿರುತ್ತಿದ್ದಳು. ಪರಿಣಾಮ, ಯಾರೋ ಒಬ್ಬ ಇಂಥ ದಿನವೇ ಸಾಯ್ತಾನಂತೆ ಎಂಬ ಸುದ್ದಿ ಕೇಳಿ- ಸಾವಿಗೂ ಮೊದಲೇ ಸಂತಾಪ ಕೋರಲು ನೂರಾರು ಜನ ಬಂದಿರುತ್ತಿದ್ದರು. ಅವರನ್ನು ನೋಡಿದಾಕ್ಷಣವೇ- ಮನುಷ್ಯನಿಗೆ ಹುಚ್ಚು ಹಿಡಿದಿರುತ್ತಿತ್ತು!

* * *
ಇದನ್ನೆಲ್ಲ ಅಂದಾಜು ಮಾಡಿಕೊಂಡು ಯೋಚಿಸಿದರೆ- ಸಾವೆಂಬುದು ನಿರ್ದಯಿಯಾಗಿರುವುದೇ ಸರಿ ಅನಿಸುತ್ತದೆ. ಅದರ ಹೆದರಿಕೆಯಲ್ಲೇ ನಾವು ಚನ್ನಾಗಿದೀವಿ ಅನಿಸುತ್ತದೆ. ಸಾವೆಂಬ ಸರ್ವಾಧಿಕಾರಿಗೆ ಸಲಾಮು ಹೊಡೆಯುವ ಮನಸಾಗುತ್ತದೆ. ಈ ಜಗತ್ತಿನ ಅಷ್ಟೂ ಜೀವಿಗಳ ಬೆನ್ನ ಹಿಂದೆಯೇ ಇದೀಯಲ್ಲ- ಎಂಥ ಕಿಲಾಡಿ ಅಲ್ವಾ ನೀನು ಎಂದು ಛೇಡಿಸುವ ಆಸೆಯಾಗುತ್ತದೆ. ಒಂದು ವೇಳೆ `ಸಾವು' ಇಂಥ ದಿನವೇ ಬರುತ್ತೆ ಎಂದು ಮೊದಲೇ ಗೊತ್ತಿದ್ದಿದ್ದರೆ `ಸೂತಕ' ಎಂಬ ಪದಕ್ಕೆ ಅರ್ಥವೂ ಇರುತ್ತಿರಲಿಲ್ಲ. ಹೇಗೆ ಬದುಕಬೇಕು ಮತ್ತು ಹೇಗೆಲ್ಲ ಬದುಕಬಾರದು ಎಂಬ ಎಚ್ಚರಿಕೆಯ ಪಾಠ ಕೂಡ ಆಗುತ್ತಿರಲಿಲ್ಲ ಎನ್ನಿಸಿದಾಗ ವಿಸ್ಮಯವಾಗುತ್ತದೆ. ಮತ್ತು ಹೀಗೆಲ್ಲ ಯೋಚಿಸಿದ ನಂತರವೂ- ನಮಗೆ ಒಂದಷ್ಟು ಜಾಸ್ತಿ ಬದುಕುವ ಅವಕಾಶ ಕೊಡು ಎಂದು ಸಾವೆಂಬ ಸಾವನ್ನೇ ಬೊಗಸೆಯೊಡ್ಡಿ ಬೇಡುವ ದುರಾಸೆಯೂ ಜತೆಯಾಗುತ್ತದೆ, ಅಲ್ಲವೇ?

I CAN’T ACCEPT NOT TRYING - Michael Jordan


 


 In Pursuit of Excellence – by Michael Jordan

 


This is an article by Michael Jordan and is adopted from his book I CAN’T ACCEPT NOT TRYING – Hope you find it interesting & useful  . . .



 

I have the goal of being the best, but I approach everything step by step using short-term goals. When I meet one goal, I set another reasonable goal I can achieve if I work hard. Each success leads to the next one. Each time I visualize where I want to be and what kind of person and player I want to become. I approach it with the end in mind. I know exactly where I want to go, and I focus on getting there. As I reach those goals, I gain a little more confidence. It’s all mental for me. I never write anything down. I just concentrate on the next step.


I’m not afraid to ask anybody anything. Why should I be afraid ? My attitude is “Help me, give me direction.”

 

 I could apply that approach to anything I might do. It’s no different for the person whose goal is to become a doctor. All those steps are like pieces of a puzzle. They all come together to form a picture. If it’s complete, you reach your goal. If not, don’t get down on yourself.
 


Don’t think about failure

 

I never look at the consequence of failing, because when you think about the consequences, you always think of a negative result. If I’m jumping into any situation, I’m thinking I’m going to be successful – not about what happens if I fail.


Some people get frozen by fear of failure by thinking about the possibility of a negative result. They might be afraid of looking bad or being embarrassed. I realized that if I was going to achieve anything in life, I had to be aggressive. I had to get out there and go for it. I don’t believe you can achieve anything by being passive.


 I know fear is an obstacle for some people, but to me it’s an illusion. Any fear is an illusion. You think something is standing in your way, but nothing is there – only an opportunity to do your best and gain some success.


 
If it turns out my best isn’t good enough, then at least I’ll never be able to look back and say I was too afraid to try. Maybe I just didn’t have it. Maybe I just wasn’t good enough. There’s nothing wrong with that and nothing to be afraid of either. Failure always made me try harder the next time.
 


My advice is, “Think positive, and find fuel in failure.” Sometimes failure gets you closer to where you want to be. The greatest inventions in the world had hundreds of failures before answers were found.
 


Fear sometimes comes from a lack of focus or concentration. If you know you are doing the right things, just relax and perform. Forget about the outcome. You can’t control anything anyway.


 When you make a presentation in business, you may do all the things necessary, but then it’s out of your hands. Either the clients like the presentation, or they don’t. It’s up to the client or the buyer. So don’t worry about it.


 
I can accept failure. Everyone fails at something. But I can’t accept not trying. It doesn’t matter if you win as long as you give everything in your heart and work at it 110 percent. If you put in the work, the results will come. I can’t do things half heartedly, because I know if I do, then I can expect half hearted results. That’s why I approach practices the same way I approach games. I can’t dog it during practice and then, when I need that extra push late in the game, expect it to be there.


But that’s how a lot of people approach things. And that’s why they fail. They sound like they’re committed to being the best they can be. They say all the right things, make all the proper appearances. But they’re looking for reasons instead of answers.

 

 

Overcome Obstacles


You see it all the time in business. There are a million excuses for not paying the price: “ If only I was given a particular opportunity,” “ If only the boss liked me better, I could accomplish this or that. ” Nothing but excuses.


 That’s not to say there aren’t obstacles or distractions. If you’re trying to achieve, there will be roadblocks. But obstacles don’t have to stop you. If you run into a wall, don’t give up. Figure out how to climb it, go through it, or work around it.


You have to stick to your plan. A lot of people try to pull you down to their level because they can’t achieve certain things. But very few people get anywhere by taking shortcuts. More people gain success the honest way, by setting their goals and committing themselves to achieving those goals.
 


Out society tends to glamorize individual success without considering the entire process. What if you have a CEO with a great idea, but he doesn’t have the people to make it happen ? If you don’t have all the pieces in place, particularly at the front lines, that idea doesn’t mean a thing. You can have the greatest sales people in the world, but if the people making the product aren’t any good, no one will buy it.


 
Managers, like coaches, have to find ways to utilize individual talents in the best interests of the company. It’s a selfless process. In our society sometimes it’s hard to come to grips with filling a role instead of trying to be a superior. We tend to ignore or fail to respect all the parts that make the whole possible. Talent wins games, but teamwork and intelligence win championships.
 


Everything I achieved can be traced back to the way I approached and applied the fundamentals, the basic building blocks or principles that make everything work. I don’t care what you’re doing – you can’t skip fundamentals if you want to be the best. But some guys don’t want to deal with that. They’re looking for instant gratification, so maybe they skip a few steps. They’re so focussed on composing a masterpiece that they never master the scales. You can get away with it through the early stages, but it’s going to catch up with you eventually. The minute you get away from fundamentals – whether it’s proper technique, work ethic, or mental preparation – the bottom can fall out of your game, your schoolwork, your job, whatever you’re doing.


When you understand the building blocks, you see how the entire operation works. And that allows you to operate more intelligently. It sounds easy, but it isn’t. You have to monitor your fundamentals constantly because the only thing that changes will be your attention to them. The fundamentals will never change. There is a right way and a wrong way to do things. Get the fundamentals down, and the level of everything you do will rise.


 


Lead by Example


I’ve always tried to lead by example. I never tried to motivate by talking because I don’t think words ever mean as much as action. A picture carries a thousand words. So I tried to paint a picture of hard work and discipline. Why not ? If the person out front doesn’t work hard, why should anyone else ?
 


A leader has to earn that title. You aren’t the leader just because you’re the best player on the team, the smartest person in the class, or the most popular. No one can give you that title either. You have to gain the respect of those around you by your actions. You have to be consistent in your approach, whether it’s basketball practice, a sales meeting, or dealing with your family. Those around you have to know what to expect. They have to be confident that you’ll be there, that your performance will be consistent from game to game, particularly when things get tight.


Ultimately, coaches or players can say anything they want, but if they don’t back it up with performance and hard work, the talking doesn’t mean a thing. A leader can’t make any excuses. There has to be quality in everything you do – off the court, on the court, in the classroom, on the playground, inside the meeting room, outside of work. You have to transfer those skills, that drive, to whatever environment you’re in. And you have to be willing to sacrifice certain individual goals, if necessary, for the good of the team. A leader is also a person who has had past successes in certain situations and isn’t afraid of taking the chance to lead others down that road again.
 


Along the way, you also have to stand up for what you believe and hold on to your convictions. Every home, every business, and every neighbourhood needs someone to lead.


An article on Steven Paul Jobs, Apple Inc founder


 Steven Paul Jobs, Apple Inc founder

 

 

ಕಾಲೇಜು ಓದದ ಜಾಬ್ಸ್ ಇಷ್ಟೆಲ್ಲಾ ಸಾಧನೆ ಮಾಡಬಹುದಾಗಿದ್ದರೆ ಮಾರ್ಕ್ಸ್ ಕಡಿಮೆ ಬಂತು, ಫೇಲಾಯಿತು ಅಂತ ನೇಣುಹಾಕಿಕೊಳ್ಳುವ ನಾವೇಕೆ ಜೀವನವನ್ನು ಸಕಾರಾತ್ಮಕವಾಗಿ ನೋಡಬಾರದು? ಸೋಲನ್ನೇಕೆ ಸವಾಲಾಗಿ ಸ್ವೀಕರಿಸಬಾರದು? ಆದರೆ ಅದಕ್ಕೆ ಕಲಿಯುವ ಹಸಿವು, ಏನಾದರೂ ಮಾಡಬೇಕೆಂಬ ಹಂಬಲ, ಯಾರನ್ನೂ ಲೆಕ್ಕಿಸದೆ ತೋಚಿದ್ದನ್ನು ಸಾಧಿಸುವ ಎದೆಗಾರಿಕೆ ಬೇಕು. ಅದಕ್ಕೇ ಜಾಬ್ಸ್ ಹೇಳಿದ್ದು Stay Hungry, Stay Foolish!

 

ಐಮ್ಯಾಕ್, ಐ ಪಾಡ್, ಐ ಟ್ಯೂನ್ಸ್, ಐ ವರ್ಕ್, ಐ ಲೈಫ್, ಐ ಫೋನ್.

ಇವುಗಳಲ್ಲಷ್ಟೇ ಅಲ್ಲ, ಆತನ ಬಗ್ಗೆ ಬರೆಯಲಾಗಿರುವ ಅನಧಿಕೃತ ಆತ್ಮಚರಿತ್ರೆಯಾದ ``ಐಕಾನ್"ನಲ್ಲೂ ``ಐ" ಇದೆ! ಅವನನ್ನು ಟೀಕಾಕಾರರು ``Ego Maniac" ಎಂದು ಜರಿದರೂ ಆತನಲ್ಲಿರುವುದು ``ನಾನು" ಎಂಬ ``ಅಹಂ" ಅಲ್ಲ, ನಾನೇನಾದರೂ ವಿಭಿನ್ನವಾದುದನ್ನು ಮಾಡಬೇಕೆಂಬ ಹಂಬಲ. ಇಂತಹ ಹಂಬಲವನ್ನು ಕೆಲವರು ಆಡಿಕೊಂಡಿದ್ದೂ ಇದೆ. ಸ್ಟೀವ್ ಜಾಬ್ಸ್ ಯಾವುದಕ್ಕೂ ತಲೆಕೆಡಿಸಿಕೊಳ್ಳುವ ವ್ಯಕ್ತಿಯಲ್ಲ, ಆದರೆ ಬೇರೆಯವರ ತಲೆಕೆಡಿಸಿ ಬಿಡುತ್ತಾನೆ. ಅದಕ್ಕಾಗಿಯೇ ``Reality Distortion" ಎಂದು ದೂರುತ್ತಾರೆ. ಆದರೇನಂತೆ ಹುಚ್ಚುಭ್ರಮೆ ಎನಿಸುವುದನ್ನೂ ವಾಸ್ತವಕ್ಕಿಳಿಸುವ ಆತನನ್ನು ನಿರ್ಲಕ್ಷಿಸಲು ಜಗತ್ತಿನಲ್ಲಿ ಯಾರಿಗೂ ಸಾಧ್ಯವಿಲ್ಲ.

"Think Different''
The people who are crazy [^] enough to think they can change the world are the ones who do!!

ಈ ರೀತಿ ಸಾಗುವ ``ಆಪಲ್" ಕಂಪನಿಯ ಜಾಹೀರಾತು ಆತನ ಮನೋಬಲದ ಪ್ರತಿಬಿಂಬವೇ ಆಗಿದೆ. 1997ರಲ್ಲಿ ಆತ ರೂಪಿಸಿದ `ಐ-ಮ್ಯಾಕ್' ಕಂಪ್ಯೂಟರ್ ಜಗತ್ತಿನ ಅತ್ಯಂತ ಹಗುರವಾದ ಪಿಸಿ ಎಂಬ ಹೆಗ್ಗಳಿಕೆಗೆ ಪಾತ್ರವಾದರೆ, 2001ರಲ್ಲಿ ಹೊರತಂದ ``ಐ-ಪಾಡ್" ಸಂಗೀತವನ್ನು ಆಲಿಸುವ ಪ್ರಕ್ರಿಯೆಗೇ ಹೊಸ ಅರ್ಥ ನೀಡಿತು. ಇದುವರೆಗೂ 11 ಕೋಟಿ ಐ-ಪಾಡ್‌ಗಳು ಖರ್ಚಾಗಿವೆ. ಅದರ ಬೆನ್ನಲ್ಲೇ ಪ್ರಾರಂಭವಾದ ``ಐ-ಟ್ಯೂನ್ಸ್ ಸ್ಟೋರ್"ಗಳಿಂದ 400 ಕೋಟಿ ಹಾಡುಗಳು ಖರೀದಿಯಾಗಿವೆ!! 2007ರಲ್ಲಿ ದೂರಸಂಪರ್ಕ ಕ್ಷೇತ್ರಕ್ಕೂ ಕಾಲಿರಿಸಿದ ಆತ ಹೊರತಂದ ``ಐ-ಫೋನ್"(ಮೊಬೈಲ್) ಖರೀದಿಸಲು ಅಮೆರಿಕನ್ನರು ಹಿಂದಿನ ದಿನದಿಂದಲೇ ಸಾಲುಗಟ್ಟಿ ನಿಂತಿದ್ದರು. ಅಂದು 599 ಡಾಲರ್‌ಗೆ ನೀಡಿದ್ದ ಫೋನ್‌ಗಳನ್ನು ಮೊನ್ನೆ ಜೂನ್ 10ರಂದು 199 ಡಾಲರ್‌ಗೆ ಮಾರುಕಟ್ಟೆಗೆ ಬಿಟ್ಟಿದ್ದಾನೆ. ಭಾರತದಲ್ಲೂ ಅತ್ಯಂತ ಕಾತರದಿಂದ ಕಾಯುತ್ತಿರುವ ಮೊಬೈಲ್ ಎಂದರೆ ಐ-ಫೋನ್. ಬರುವ ಆಗಸ್ಟ್‌ನಲ್ಲಿ ಐ-ಫೋನ್ ಭಾರತದಲ್ಲೂ ಬಿಡುಗಡೆಯಾಗಲಿದ್ದು ನಮ್ಮಲ್ಲಿನ ಮುಂಚೂಣಿ ಮೊಬೈಲ್ ಕಂಪನಿಗಳಾದ ನೋಕಿಯಾ, ಸೋನಿ ಎರಿಕ್‌ಸನ್ ಹಾಗೂ ಮೋಟೊರೊಲಾ ಕಂಪನಿಗಳು ಮಳೆಗಾಲದಲ್ಲೂ ಬೆವರಲು ಆರಂಭಿಸಿವೆ!

ಇದು ಉತ್ಪ್ರೇಕ್ಷೆಯ ಮಾತಲ್ಲ. ಪ್ರಾರಂಭದಲ್ಲಿ ದುಬಾರಿ ಎನಿಸಿದ್ದ ಐ-ಪೋನ್‌ನ ಬೆಲೆಯನ್ನು ಮೂರನೇ ಎರಡು ಭಾಗದಷ್ಟು ಕಡಿತಗೊಳಿಸಿರುವುದರಿಂದ ಸಾಮಾನ್ಯ ಜನರೂ ಖರೀದಿಸಬಹುದಾಗಿದೆ. ``3ಜಿ ನೆಟ್‌ವರ್ಕ್"ನಿಂದಾಗಿ ಇಂಟರ್‌ನೆಟ್ ಅನ್ನು ಜಾಲಾಡುವುದು ತೀರಾ ಸರಳ ಹಾಗೂ ಸುಲಭವಾಗಲಿದೆ. ಐ-ಫೋನ್‌ನಲ್ಲೇ ಐ-ಪಾಡ್ ಕೂಡ ಇರುವುದರಿಂದ ಸಂಗೀತವನ್ನು ಉತ್ಕೃಷ್ಟ ಸ್ತರದಲ್ಲಿ ಕೇಳಬಹುದು. ಇಂತಹ ಸಾಧನೆಯನ್ನು ಗುರುತಿಸಿರುವ ಖ್ಯಾತ ``ಬ್ಲೆಂಡರ್" ಮ್ಯಾಗಝಿನ್, ಜಾಬ್ಸ್ ಅವರನ್ನು ಪ್ರಪಂಚದ ಅತ್ಯಂತ ಪ್ರಭಾವಿ ವ್ಯಕ್ತಿ ಎಂದಿದೆ. ಎಪ್ಪತ್ತೈದು ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿ ಅಂತಹ ಬಿರುದು ನೀಡಿದೆ.  'The undisputed king [^] of the online music revolution', 'Technology trendsetter' ಎಂದು ಮ್ಯಾಗಝಿನ್‌ನ ಸಂಪಾದಕ ಕ್ರೇಗ್ ಮಾರ್ಕ್ಸ್ ಶ್ಲಾಘಿಸಿದ್ದಾರೆ. ``MySpace"ನ ಸ್ಥಾಪಕ ಟಾಮ್ ಆಂಡರ್‌ಸನ್, ``YouTube" ಸೃಷ್ಟಿಕರ್ತರಾದ ಚಾಡ್ ಹರ್ಲೆ ಮತ್ತು ಸ್ಟೀವ್ ಚೆನ್ ಅವರು ನಂತರದ ಸ್ಥಾನದಲ್ಲಿದ್ದಾರೆ ಎಂದರೆ ಜಾಬ್ಸ್ ಎಂತಹ ಸಾಧಕನಿರಬಹುದು?!

ಸತ್ತೆನೆಂದೆನಬೇಡ, ಸೋತೆನೆಂದೆನಬೇಡ
ಬತ್ತಿತೆನ್ನೊಳು ಸತ್ವದೂಟೆ ಎನಬೇಡ
ಮೃತ್ಯುವೆನ್ನುವುದೊಂದು ತೆರೆ ಇಳಿತ..!
ತೆರೆ ಏರು, ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ...

ಇಂದು ಸ್ಟೀವ್ ಜಾಬ್ಸ್ ಹೆಸರು ಕೇಳಿದರೆ ಜಗತ್ತೇ ರೋಮಾಂಚನಗೊಳ್ಳುತ್ತಿರಬಹುದು. ಆದರೆ ಆತನ ಬದುಕಿನ ಪುಟಗಳನ್ನು ತಿರುವುತ್ತಾ ಹೋದರೆ ಈ ಮೇಲಿನ ಡಿವಿಜಿ ಕವನ ನೆನಪಾಗುತ್ತದೆ. ಅವನ ಹುಟ್ಟೇ ಒಂದು ದುರಂತ. ಅವಿವಾಹಿತಳಾಗಿದ್ದ ಅಮ್ಮ ಕಾಲೇಜಿಗೆ ಹೋಗುತ್ತಿರುವಾಗಲೇ ಗರ್ಭ ಧರಿಸಿದ್ದಳು. ಹಾಗಾಗಿ ಮಗು ಹೊಟ್ಟೆಯಲ್ಲಿರುವಾಗಲೇ ದತ್ತು ನೀಡುವ ನಿರ್ಧಾರಕ್ಕೆ ಬಂದಳು. ಆದರೆ ಆಕೆಯದ್ದೊಂದು ಪೂರ್ವ ಷರತ್ತಿತ್ತು. ಮಗುವನ್ನು ದತ್ತು ಸ್ವೀಕರಿಸುವ ಪೋಷಕರಿಬ್ಬರೂ ಕಾಲೇಜು ಪದವೀಧರರಾಗಿರಬೇಕು. ವಿದ್ಯಾವಂತ ಪೋಷಕರು ದೊರೆತರೆ ತನ್ನ ಮಗುವನ್ನೂ ಕಾಲೇಜು ವ್ಯಾಸಂಗ ಮಾಡಿಸುತ್ತಾರೆ ಎಂಬ ನಂಬಿಕೆ ಆಕೆಯದ್ದು. ಪದವೀಧರ ದಂಪತಿಯೊಬ್ಬರು ಮಗುವನ್ನು ದತ್ತು ಸ್ವೀಕರಿಸಲು ಮುಂದೆ ಬಂದರು. ಆದರೆ ಅವರಿಗೆ ಬೇಕಿದ್ದು ಹೆಣ್ಣು ಮಗು. ಹುಟ್ಟಿದ್ದು ಗಂಡುಮಗು. ಹುಟ್ಟಿದ ಕ್ಷಣದಲ್ಲೇ ಮಗು ಅನಾಥವಾಯಿತು. ಆದರೇನಂತೆ ಜಸ್ಟಿನ್ ಹಾಗೂ ಕ್ಲಾರಾ ಜಾಬ್ಸ್ ಎಂಬ ಕ್ಯಾಲಿಫೋರ್ನಿಯಾದ ದಂಪತಿಯೊಬ್ಬರು ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದಾದರು. ಆದರೆ ಅವರು ಪದವೀಧರರಾಗಿರಲಿಲ್ಲ. ಹಾಗಾಗಿ ದತ್ತು ನೀಡಲು ಒಪ್ಪಲಿಲ್ಲ. ಕೊನೆಗೂ ಹರಸಾಹಸ ಮಾಡಿ, ಮನವೊಲಿಸಿದ ಜಾಬ್ಸ್ ದಂಪತಿಗಳು ಮಗುವನ್ನು ದತ್ತು ತೆಗೆದುಕೊಂಡು ಸ್ಟೀವನ್ ಪೌಲ್ ಜಾಬ್ಸ್ ಎಂಬ ಹೆಸರಿಟ್ಟರು. ಹದಿನೇಳನೇ ವರ್ಷಕ್ಕೆ ಕಾಲೇಜು ಮೆಟ್ಟಿಲು ತುಳಿದ ಸ್ಟೀವ್ ಜಾಬ್ಸ್‌ಗೆ ಓದು ರುಚಿಸಲಿಲ್ಲ. ಕಾಲೇಜನ್ನು ಅರ್ಧಕ್ಕೇ ಬಿಟ್ಟ ಆತನಿಗೆ ಒಪ್ಪೊತ್ತಿನ ಊಟಕ್ಕೂ ಕುತ್ತು ಬಂತು. ಆದರೇನಂತೆ ಭಾನುವಾರ ಮಾತ್ರ `ಫುಲ್ ಮೀಲ್ಸ್' ದೊರೆಯುತ್ತಿತ್ತು! ಕಾಲೇಜಿನಿಂದ 7 ಕಿ.ಮೀ. ದೂರದಲ್ಲಿದ್ದ ಹರೇ ಕೃಷ್ಣ ದೇವಾಲಯದಲ್ಲಿ ಪ್ರತಿ ಭಾನುವಾರ ಉಚಿತ ಊಟ ನೀಡಲಾಗುತ್ತಿತ್ತು. ಆ ಊಟಕ್ಕಾಗಿ 7 ಕಿ.ಮೀ. ನಡೆದು ಹೋಗುತ್ತಿದ್ದ. ಆತ ಹೋಗಿದ್ದು ಹೊಟ್ಟೆತುಂಬಿಸುವ ಊಟಕ್ಕಾದರೂ ಊಟಕ್ಕಿಂತ ಆಧ್ಯಾತ್ಮ ರುಚಿಸತೊಡಗಿತು. ಆಧ್ಯಾತ್ಮವನ್ನು ಅರಸಿಕೊಂಡು ಭಾರತಕ್ಕೂ ಭೇಟಿ ನೀಡಿದ. ಭಾರತದಿಂದ ವಾಪಸ್ಸಾದ ಜಾಬ್ಸ್, ಅಟಾರಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಸ್ಟೀವ್ ವೋಝ್ನಿಯಾಕ್ ಪರಿಚಯವಾಗಿದ್ದು ಅಲ್ಲೇ. ಆತ ಮಹಾಬುದ್ಧಿವಂತ. ತಾಂತ್ರಿಕ ವಿಷಯಗಳಲ್ಲಿ ಪರಿಣತ. ಇತ್ತ ಜಾಬ್ಸ್ ಕೂಡ ತಾಂತ್ರಿಕ ವಿಷಯದಲ್ಲಿ ಉತ್ತಮ ಜ್ಞಾನ ಹೊಂದಿದ್ದರೂ ಮಾರ್ಕೆಟಿಂಗ್‌ನಲ್ಲಿ ಪಂಟ.
ಇವರಿಬ್ಬರೂ ಸೇರಿ 1976, ಏಪ್ರಿಲ್ 1ರಂದು ಆರಂಭಿಸಿದ್ದೇ ``ಆಪಲ್ ಕಂಪ್ಯೂಟರ್"!

ಆಗ ಜಾಬ್ಸ್‌ಗೆ ಕೇವಲ 21 ವರ್ಷ. ಆಪಲ್ ಪ್ರಾರಂಭವಾಗಿದ್ದು ಜಾಬ್ಸ್‌ನ ಮನೆಯ ಗ್ಯಾರೇಜ್‌ನಲ್ಲಿ. ಆದರೇನಂತೆ ಯಶಸ್ಸು ಅರಸಿಕೊಂಡು ಬಂತು. ಆಪಲ್ ರೂಪಿಸಿದ ಆಪಲ್-1, ಆಪಲ್-2 ಕಂಪ್ಯೂಟರ್‌ಗಳು ಕಂಪನಿಗೆ ಒಳ್ಳೆಯ ಹೆಸರು, ಹಣ ತಂದುಕೊಟ್ಟವು. ಈ ಮಧ್ಯೆ 1981ರಲ್ಲಿ ನಡೆದ ವಿಮಾನ ದುರ್ಘಟನೆಯೊಂದರಲ್ಲಿ ವೋಝ್ನಿಯಾಕ್ ಗಾಯಗೊಂಡರು. ಹಾಗಾಗಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ(ಸಿಇಓ) ಜಾಬ್ಸ್ ಜವಾಬ್ದಾರಿ ವಹಿಸಿಕೊಂಡರು. ಹಾಗೆ ಅಧಿಕಾರ ವಹಿಸಿಕೊಂಡ ಜಾಬ್ಸ್‌ಗೆ ಕಂಪನಿಯನ್ನು ಇನ್ನೂ ವಿಸ್ತಾರಗೊಳಿಸಲು, ಯಶಸ್ಸಿನತ್ತ ಕೊಂಡೊಯ್ಯಲು ಸೂಕ್ತ ವ್ಯಕ್ತಿಯೊಬ್ಬರ ಸಾಥ್ ಬೇಕೆನಿಸತೊಡಗಿತು. ಆಗ ಕಣ್ಣಿಗೆ ಕಂಡಿದ್ದೇ ಪೆಪ್ಸಿ ಕಂಪನಿಯ ಸಿಇಓ ಜಾನ್ ಸ್ಕೂಲಿ. ಆದರೆ ಪೆಪ್ಸಿಯಂತಹ ಕಂಪನಿಯನ್ನು ಬಿಟ್ಟು ಯಾರು ತಾನೇ ಆಪಲ್‌ನಂತಹ ಅದಾಗತಾನೇ ಹೊರಹೊಮ್ಮುತ್ತಿರುವ ಕಂಪನಿಗೆ ಬರುತ್ತಾರೆ? ಹಾಗಂತ ಜಾಬ್ಸ್ ಸುಮ್ಮನಾಗಲಿಲ್ಲ. ಸ್ಕೂಲಿಯನ್ನು ಮನವೊಲಿಸಲು ಮುಂದಾದ. Do you want to spend the rest of your life selling sugared water [^], or do you want a chance to change the world? ಎಂಬ ಜಾಬ್ಸ್‌ನ ಮಾತುಗಳು ಸ್ಕೂಲಿಯನ್ನು ಯಾವ ರೀತಿ ಪ್ರಚೋದಿಸಿದವೆಂದರೆ ಪೆಪ್ಸಿ ಕಂಪನಿ ಬಿಟ್ಟ ಸ್ಕೂಲಿ 1983ರಲ್ಲಿ ಆಪಲ್ ಸೇರಿಬಿಟ್ಟ. 1984ರಲ್ಲಿ ಆಪಲ್ ಕಂಪನಿ ಅತ್ಯಂತ ಆಕರ್ಷಕ ಟಿವಿ ಜಾಹೀರಾತೊಂದನ್ನು ಹೊರತಂದಿತು. ಇದಾಗಿ ಎರಡು ದಿನಗಳಲ್ಲೇ ಅಂದರೆ 1984, ಜನವರಿ 24ರಂದು ನಡೆದ ಆಪಲ್ ಕಂಪನಿಯ ಷೇರುದಾರರ ಸಭೆಯಲ್ಲಿ ಜಾಬ್ಸ್ `ಮ್ಯಾಕಿಂತೋಷ್' (ಪಿಸಿ) ಕಂಪ್ಯೂಟರನ್ನು ಅನಾವರಣಗೊಳಿಸಿದರು. ನಾವು ಬಳಸುವ `ಮೌಸ್' ಮೊದಲಿಗೆ ಬಳಕೆಗೆ ಬಂದಿದ್ದೇ ಮ್ಯಾಕಿಂತೋಷ್‌ನೊಂದಿಗೆ! ಇಂತಹ ನವೀನ ಸಂಶೋಧನೆಯಿಂದಾಗಿ ಆಪಲ್ 2 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿತು. ಈ ನಡುವೆ ಜಾಬ್ಸ್ ಮತ್ತು ಸ್ಕೂಲಿ ನಡುವೆ ಭಿನ್ನಾಭಿಪ್ರಾಯ ಕಾಣಿಸತೊಡಗಿತು. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ಆಡಳಿತ ಮಂಡಳಿಯ ಸದಸ್ಯರು ಸ್ಕೂಲಿ ಪರ ನಿಂತ ಕಾರಣ ಕಂಪನಿಯ ಸ್ಥಾಪಕನಾದ ಜಾಬ್ಸ್‌ನನ್ನೇ ಹೊರಹಾಕಲಾಯಿತು!

ಅವನ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಸಿಟ್ಟಿಗೆದ್ದು ಯಾರನ್ನಾದರೂ ಕೊಲ್ಲುತ್ತಿದ್ದರು, ಇಲ್ಲವೇ ಹುಚ್ಚರಾಗುತ್ತಿದ್ದರು. ಆದರೆ ಅಂತಹ ಆಘಾತದಿಂದಲೂ ಸಾವರಿಸಿಕೊಂಡ ಜಾಬ್ಸ್ ``ನೆಕ್ಸ್ಟ್"ಎಂಬ ಕಂಪನಿ ಪ್ರಾರಂಭಿಸಿದ. ಅಲ್ಲದೆ ಜಾರ್ಜ್ ಲುಕಾಸ್ ಎಂಬುವವರಿಂದ ``ಪಿಕ್ಸರ್" ಎಂಬ ಡಿಜಿಟಲ್ ಗ್ರಾಫಿಕ್ಸ್ ಕಂಪನಿಯನ್ನೂ ಖರೀದಿ ಮಾಡಿದ. ಆ ಕಂಪನಿ Toy Story ಎಂಬ ಆನಿಮೇಷನ್ ಚಿತ್ರವನ್ನು ರೂಪಿಸಿತು. ಅದು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಕಂಡಿತು. ಕಂಪನಿಗೂ ಒಳ್ಳೆಯ ಹೆಸರು ಬಂತು. ಇದನ್ನು ಗಮನಿಸಿದ ವಿಶ್ವವಿಖ್ಯಾತ `ಡಿಸ್ನಿ' ಕಂಪನಿ 7.4 ಶತಕೋಟಿ ಡಾಲರ್ ಕೊಟ್ಟು `ಪಿಕ್ಸರ್' ಅನ್ನೇ ಖರೀದಿ ಮಾಡಿತು. ಸ್ಟೀವ್ ಜಾಬ್ಸ್‌ನ ಗ್ರಹಗತಿಯೇ ಬದಲಾಯಿತು. ಇತ್ತ ಜಾಬ್ಸ್ ಅನುಪಸ್ಥಿತಿಯಲ್ಲಿ ಐಬಿಎಂ, ಮೈಕ್ರೊಸಾಫ್ಟ್‌ಗಳ ಜತೆ ಸ್ಪರ್ಧೆ ಮಾಡಲಾಗದೆ, ಹೊಸ ಹೊಸ `ಆಪರೇಟಿಂಗ್ ಸಿಸ್ಟಮ್'ಗಳನ್ನು ಹೊರತರಲಾಗದೆ ಆಪಲ್ ಕಂಪನಿ ನಷ್ಟ ಅನುಭವಿಸಲಾರಂಭಿಸಿತು. ಮತ್ತೆ ಆಪಲ್ ತಲೆಯೆತ್ತಬೇಕಾದರೆ ಜಾಬ್ಸ್‌ನ `ನೆಕ್ಸ್ಟ್' ಕಂಪನಿಯ ಜತೆ ಕೈಜೋಡಿಸುವುದು ಮಾತ್ರವಲ್ಲ, ಜಾಬ್ಸ್‌ನ ನಾಯಕತ್ವದ ಅಗತ್ಯವೂ ಅನಿವಾರ್ಯವಾಯಿತು!! 1997ರಲ್ಲಿ ನೆಕ್ಸ್ಟ್ ಕಂಪನಿಯನ್ನು ಖರೀದಿ ಮಾಡಿದ ಆಪಲ್, ಜಾಬ್ಸ್ ಅವರನ್ನೇ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ ನೇಮಕ ಮಾಡಿಕೊಂಡಿತು!!

ಆಪಲ್‌ಗೆ ಹಿಂದಿರುಗಿದ ಜಾಬ್ಸ್ "Mac OS X" ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಹೊರತರುವ ಮೂಲಕ ಕಂಪನಿಗೆ ಮತ್ತೆ ಜೀವ ತುಂಬಲಾರಂಭಿಸಿದ. ಆನಂತರ ಐಮ್ಯಾಕ್ ಬಂತು, ಐಪಾಡ್, ಐಟ್ಯೂನ್‌ನೊಂದಿಗೆ ಸಂಗೀತ ಕ್ಷೇತ್ರಕ್ಕೂ ಕಾಲಿರಿಸಿದ. ಅಲ್ಲದೆ ಈಚೆಗೆ ಆತ ಹೊರತಂದ ಐಫೋನ್ ವರ್ಷ ತುಂಬುವುದಕ್ಕೂ ಮೊದಲೇ ಜಗತ್ತಿನ ಮೆಚ್ಚುಗೆ ಗಳಿಸಿದೆ, ಮೊಬೈಲ್ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆದಿದೆ. ಇವತ್ತು ಜಾಬ್ಸ್ ಮಾಡುವ ಭಾಷಣಗಳು ``Stevenotes" ಎಂದೇ ಪ್ರಸಿದ್ಧಿಯಾಗುತ್ತಿವೆ. ಆತ ಕಾಲೇಜು ಓದದಿದ್ದರೇನಂತೆ, ಜಗತ್ತಿನ ಅತ್ಯುತ್ತಮ ಕಾಲೇಜುಗಳು ಜಾಬ್ಸ್‌ನನ್ನು ಉಪನ್ಯಾಸಕ್ಕಾಗಿ ಕರೆಯುತ್ತಿವೆ. ಅಂತಹ ಕಾಲೇಜುಗಳಲ್ಲಿ ವಿಶ್ವವಿಖ್ಯಾತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವೂ ಒಂದು. 2005, ಜೂನ್ 12ರಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲು ನಿಂತ ಜಾಬ್ಸ್, ``ಜಗತ್ತಿನ ಅತ್ಯುತ್ತಮ ವಿವಿಗಳಲ್ಲಿ ಒಂದಾದ ಸ್ಟ್ಯಾನ್‌ಫೋರ್ಡ್‌ನ ವಿದ್ಯಾರ್ಥಿಗಳಾದ ನಿಮ್ಮನ್ನುದ್ದೇಶಿಸಿ ಮಾತನಾಡುವ ಅವಕಾಶ ದೊರೆತಿರುವುದು ನನಗೆ ಸಂದ ದೊಡ್ಡ ಗೌರವ. ಆದರೆ ನಾನೆಂದೂ ಕಾಲೇಜಿನಿಂದ ಪದವಿ ಪಡೆದು ಹೊರಹೋದವನಲ್ಲ. ಇಂದು ನಾನು ನಿಮಗೆ ನನ್ನ ಜೀವನದ ಮೂರು ಕಥೆಗಳನ್ನು ಹೇಳಲು ಬಯಸುತ್ತೇನೆ. ಅವುಗಳಲ್ಲಿ ವಿಶೇಷವೇನಿಲ್ಲ. ಬರೀ ಮೂರು ಕಥೆಗಳಷ್ಟೆ...."

ಅಂದು ಆತ ಹೇಳಿದ ಮೊದಲ ಕಥೆ ಆತನ ದತ್ತು ಸ್ವೀಕಾರ ಹಾಗೂ ಕಾಲೇಜಿಗೆ ತಿಲಾಂಜಲಿ ಇತ್ತ ಘಟನೆಯ ಬಗ್ಗೆ. ಎರಡನೆಯದ್ದು ತಾನೇ ಪ್ರಾರಂಭಿಸಿದ ಕಂಪನಿಯಿಂದ ತನ್ನನ್ನೇ ಕಿತ್ತೊಗೆದಿದ್ದು ಹಾಗೂ ಅದನ್ನು ಸವಾಲಿನಂತೆ ತೆಗೆದುಕೊಂಡು ಪರಿಸ್ಥಿತಿಯನ್ನು ಎದುರಿಸಿದ ಘಟನೆಗೆ ಸಂಬಂಧಿಸಿದ್ದು. ಮೂರನೆಯದ್ದನ್ನು ಅವರ ಮಾತಿನಲ್ಲೇ ಕೇಳೋಣ.

``ಇದೇ ನಿನ್ನ ಕೊನೆಯ ದಿನ ಎಂಬಂತೆ ನೀನು ಪ್ರತಿದಿನವನ್ನೂ ಕಳೆದರೆ ಒಂದಲ್ಲ ಒಂದು ದಿನ ಅದು ನಿಜವಾಗುತ್ತದೆ ಎಂಬ ಯಾರೋ ಹೇಳಿದ್ದ ಮಾತು 17 ವರ್ಷದವನಾಗಿದ್ದ ನನ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು. ಆನಂತರ ಪ್ರತಿದಿನವೂ ಬೆಳಗ್ಗೆ ಎದ್ದು ಕನ್ನಡಿಯ ಮುಂದೆ ನಿಂತು, ಇವತ್ತೇ ನನ್ನ ಜೀವಮಾನದ ಕಡೆಯ ದಿನ ಎಂದಾಗಿದ್ದರೆ ಇಂದು ಮಾಡಲು ಹೊರಟಿರುವ ಕೆಲಸವನ್ನು ಮಾಡುತ್ತಿದ್ದೆನೇ? ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೆ. ಅಷ್ಟಕ್ಕೂ ಸಾವು ಎದುರಿಗೆ ನಿಂತಿದ್ದಾಗ ಎಲ್ಲವೂ ನಗಣ್ಯವಾಗಿ ಬಿಡುತ್ತದೆ. ಒಂದು ವರ್ಷದ ಹಿಂದೆ ನನಗೆ ಕ್ಯಾನ್ಸರ್ ಬಂದಿರುವುದು ಪತ್ತೆಯಾಯಿತು. ಬೆಳಗ್ಗೆ 7.30ಕ್ಕೆ ವೈದ್ಯಕೀಯ ತಪಾಸಣೆ ನಡೆಯಿತು. ಅದರಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ಸ್ಪಷ್ಟವಾಗಿ ಗೋಚರಿಸಿತು. ಅದು ವಾಸಿಯಾಗದ ವಿಧದ ಕ್ಯಾನ್ಸರ್ ಆಗಿತ್ತು. ಆರು ತಿಂಗಳಿಗಿಂತ ಹೆಚ್ಚು ಕಾಲ ನಾನು ಬದುಕುವುದಿಲ್ಲ ಎಂದು ವೈದ್ಯರು ಹೇಳಿಯೂ ಬಿಟ್ಟರು. ಮನೆಗೆ ಹೋಗಿ ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸಿಬಿಡು ಎಂದ ಸಲಹೆ ನೀಡಿದರು. ವೈದ್ಯರು ನಮ್ಮನ್ನು ಸಾವಿಗೆ ಅಣಿಗೊಳಿಸುವುದೇ ಹಾಗೆ. ಅಂದರೆ ನಿನ್ನ ಹೆಂಡತಿ, ಮಕ್ಕಳ ಜತೆ ಏನೇನು ಮಾತನಾಡಿಕೊಳ್ಳಬೇಕು ಅದನ್ನೆಲ್ಲ ಮಾತಾಡಿ ಮುಗಿಸು, ಅವರ ಭವಿಷ್ಯಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡು, ನೀನು ಸತ್ತ ನಂತರವೂ ಅವರು ಖುಷಿಯಿಂದ ಇರಲು ಬೇಕಾದ ಮುಂಜಾಗ್ರತೆಗಳನ್ನು ತೆಗೆದುಕೋ ಅಂತ. ಆದರೆ ಕ್ಯಾನ್ಸರ್ ಬಂದಿರುವ ವಿಚಾರ ನನ್ನನ್ನು ಸಂಪೂರ್ಣವಾಗಿ ಆವರಿಸಿತ್ತು. ಅದೇ ದಿನ ಸಂಜೆ ವೇಳೆಗೆ ಬಯಾಪ್ಸಿ ಮಾಡಿದರು. ಸೂಜಿ ಹಾಕಿ ಕ್ಯಾನ್ಸರ್ ಗಡ್ಡೆಯ ಕೆಲವು ಸೆಲ್‌ಗಳನ್ನು ಹೊರತೆಗೆದು, ಪರೀಕ್ಷಿಸಿದರು. ಅದೃಷ್ಟವಶಾತ್, ಅದು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದಾದ ಕ್ಯಾನ್ಸರ್ ಆಗಿತ್ತು! ಅಂದು ನಾನು ಸಾವನ್ನು ಮುಟ್ಟಿನೋಡಿ ಬಂದಿದ್ದೆ!

ಅಂತಹ ಅನುಭವದ ಬಲದಿಂದ ಹೇಳುವುದಾದರೆ ಸಾವು ಕೂಡ ಒಂದು ಉಪಯುಕ್ತ ಅನುಭವ. ಆದರೆ ಅದು ಬುದ್ಧಿಗೆ ಮಾತ್ರ ನಿಲುಕುವಂಥದ್ದು. ಅಷ್ಟಕ್ಕೂ ಯಾರೂ ಸಾಯಲು ಬಯಸುವುದಿಲ್ಲ. ಸ್ವರ್ಗಕ್ಕೆ ಹೋಗಬೇಕು ಎಂದು ಬಯಸುವವರೂ ಸಾಯಲು ಇಷ್ಟಪಡುವುದಿಲ್ಲ. ಆದರೆ ನಾವೆಲ್ಲ ಸೇರುವ ಅಂತಿಮ ತಾಣ ಸಾವು. ಇದುವರೆಗೂ ಸಾವಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ. ಅದು ಹಾಗೆಯೇ ಇರಬೇಕು. Death is very likely the single best invention of Life! ಜೀವನದಲ್ಲಿ ಸಾವು ಬದಲಾವಣೆಯ ಏಜೆಂಟ್. ಹಳಬರನ್ನು ಜಾಗ ಖಾಲಿ ಮಾಡಿಸಿ, ಹೊಸಬರಿಗೆ ಅವಕಾಶ ಮಾಡಿಕೊಡುತ್ತದೆ. ಇವತ್ತು ನೀವು ಹೊಸಬರು. ಆದರೆ ಮುಂದೊಂದು ದಿನ ನೀವು ಕೂಡ ಹಳಬರಾಗಿ ಜಾಗ ಖಾಲಿ ಮಾಡಬೇಕಾಗುತ್ತದೆ! ನಿಮಗಿರುವ ಅವಧಿ ತೀರಾ ಕ್ಷಣಿಕ. ಬೇರೆಯವರಿಗಾಗಿ ನಿಮ್ಮ ಬದುಕನ್ನು ಸವೆಸಿ ಆ ಸಮಯವನ್ನು ವ್ಯರ್ಥ ಮಾಡಬೇಡಿ. ಯಾವುದೋ ಸಿದ್ಧಾಂತಕ್ಕೆ ಸಿಕ್ಕಿಬಿದ್ದು ಬೇರೊಬ್ಬರ ಚಿಂತನೆಗಳ ಬಗ್ಗೆ ಚಿಂತೆ ಮಾಡುತ್ತಾ ಚಿತೆ ಏರಬೇಡಿ. ಇತರರ ಗದ್ದಲ ನಿಮ್ಮ ಅಂತರಾತ್ಮದ ಧ್ವನಿಯನ್ನು ಹೊಸಕಿಹಾಕಲು ಬಿಡಬೇಡಿ. ನಿಮ್ಮ ಮನಸ್ಸು ಮತ್ತು ಅಂತಃಧ್ವನಿಯನ್ನು ಹಿಂಬಾಲಿಸಿ. ನೀವೇನಾಗಬೇಕು ಎಂಬುದು ನಿಮ್ಮ ಅಂತರಾತ್ಮಕ್ಕೆ ಚೆನ್ನಾಗಿ ಗೊತ್ತಿರುತ್ತದೆ. ನಾನು ಪ್ರಾಪ್ತವಯಸ್ಕನಾಗಿದ್ದಾಗ "The Whole Earth Catalog'' ಎಂಬ ಅದ್ಭುತ ಪುಸ್ತಕವೊಂದಿತ್ತು. ನನ್ನ ತಲೆಮಾರಿನವರ ಬೈಬಲ್ ಅದಾಗಿತ್ತು. ಆದರೆ ಕಾಲಾಂತರದಲ್ಲಿ ಅದು ಕಾಲಗರ್ಭದಲ್ಲಿ ಸೇರುವ ಸಮಯ ಬಂತು. 1970ರ ದಶಕದ ಮಧ್ಯ ಭಾಗದಲ್ಲಿ "The Whole Earth Catalog''ನ ಕೊನೆಯ ಪ್ರಕಟಣೆ ಹೊರಬಿತ್ತು. ಅದರ ಹಿಂಬದಿಯ ಪುಟದ ಮೇಲೆ ಹಳ್ಳಿಯ ರಸ್ತೆಯೊಂದರ ಮುಂಜಾವಿನ ಫೋಟೊ ಇತ್ತು. ಅದರ ಮೇಲೆ ವಿದಾಯದ ಒಕ್ಕಣೆಯೊಂದಿತ್ತು- Stay Hungry, Stay Foolish!  ನಾನು ನಿಮಗೆ ಹಾರೈಸುವುದೂ ಅದನ್ನೇ - Stay Hungry, Stay Foolish! ಮನದ ತುಂಬ ಕಲಿಕೆಯ ಹಸಿವಿರಲಿ, ಮನದಾಸೆಯಂತೆ ನಡೆದುಕೊಳ್ಳಿರಿ".

ಜಾಬ್ಸ್ ಭಾಷಣದಲ್ಲಿ ನಮಗೂ ಒಂದು ಕಿವಿಮಾತಿದೆ. ಕಾಲೇಜು ಓದದ ಜಾಬ್ಸ್ ಇಷ್ಟೆಲ್ಲಾ ಮಾಡಬಹುದಾಗಿದ್ದರೆ ಮಾರ್ಕ್ಸ್ ಕಡಿಮೆ ಬಂತು, ಫೇಲಾಯಿತು ಅಂತ ನೇಣುಹಾಕಿಕೊಳ್ಳುವ ನಾವೇಕೆ ಜೀವನವನ್ನು ಸಕಾರಾತ್ಮಕವಾಗಿ ನೋಡಬಾರದು? ಸೋಲನ್ನೇಕೆ ಸವಾಲಾಗಿ ಸ್ವೀಕರಿಸಬಾರದು? ಜಾಬ್ಸ್‌ನಂತೆ ಸಾವಿರಾರು ಜನರಿಗೆ ಉದ್ಯೋಗ ನೀಡಿ ಅವರ ಬದುಕನ್ನು ಬದಲಾಯಿಸಲಾಗದಿದ್ದರೂ ಕನಿಷ್ಠ ನಮ್ಮ ಬದುಕು ಮತ್ತು ಭವಿಷ್ಯವನ್ನಾದರೂ ಹಸನಾಗಿಸಿಕೊಳ್ಳಬಹುದಲ್ಲವೆ? ಆದರೆ ಅದಕ್ಕೆ ಕಲಿಯುವ ಹಸಿವು, ಏನಾದರೂ ಮಾಡಬೇಕೆಂಬ ಹಂಬಲ, ಯಾರನ್ನೂ ಲೆಕ್ಕಿಸದೆ ತೋಚಿದ್ದನ್ನು ಸಾಧಿಸುವ ಎದೆಗಾರಿಕೆ ಬೇಕು. ಅದಕ್ಕೇ ಜಾಬ್ಸ್ ಹೇಳಿದ್ದು Stay Hungry, Stay Foolish!